ಅಭಿಪ್ರಾಯ / ಸಲಹೆಗಳು

ಗುರಿದರ್ಶಿ ಮತ್ತು ನಮ್ಮ ಧ್ಯೇಯ

ಗುರಿ(VISION)

“ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನು ಜನಪರ, ಸಮರ್ಥ ಹಾಗೂ ಮಾದರಿ ಪ್ರಯಾಣದ ಆಯ್ಕೆಯನ್ನಾಗಿ ರೂಪಿಸುವುದಾಗಿದೆ.”.

 ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಸಾರಿಗೆ ಒದಗಿಸುವ ಏಕಸ್ವಾಮ್ಯ ಹೊಂದಿದ ಸಂಸ್ಥೆಯಾಗಿದ್ದು, ಬೆಂಗಳೂರು ನಗರ, ಉಪನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಾಚರಣೆ  ವಿಸ್ತಾರ ಹೊಂದಿದೆ. ಬೆ.ಮ.ಸಾ.ಸಂಸ್ಥೆಯು ಗುಣಮಟ್ಟದ, ಸುರಕ್ಷಿತ, ವಿಶ್ವಾಸಾರ್ಹ, ಸ್ವಚ್ಛ ಮತ್ತು ಮಿತವ್ಯಯದ ಪ್ರಯಾಣ ನೀಡಲು ಬದ್ದವಾಗಿದೆ. ದಿನಂಪ್ರತಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯಲ್ಲಿನ ದಾಖಲೆಯೇ ಸಂಸ್ಥೆಯ ಯಶಸ್ಸಿನ ಪುರಾವೆ ಆಗಿದೆ. ಬೆ.ಮ.ಸಾ.ಸಂ.ಯು ಮಾಹಿತಿ ವ್ಯವಸ್ಥೆಗಳನ್ನು ಬಲಪಡಿಸಿ, ಮಾಹಿತಿ ತಂತ್ರಜ್ಞಾನದ ಅಳವಡಿಕೆ ಮುಖಾಂತರ  ಪ್ರಕ್ರಿಯೆಗಳನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತಿದೆ. ಮೂಲಸೌಕರ್ಯ ಅಭಿವೃದ್ಧಿ, ಪ್ರಯಾಣಿಕ ಸ್ನೇಹಿ ಸುತ್ತುವಳಿಗಳ ವಿಸ್ತಾರ ಮತ್ತು ಹೊಸಮಾದರಿ ವಾಹನಗಳ ಅಳವಡಿಕೆ ಮುಂತಾದ ಕ್ರಮಗಳನ್ನು ಕೈಗೊಂಡಿದೆ. ಸುತ್ತುವಳಿಗಳ ಪರಿಣಾಮಕಾರಿ ಜಾಲತಾಣ ನಿರ್ಮಾಣ, ವೈಜ್ಞಾನಿಕ ದರ ನಿಗದಿ ಸೇವಾ ವಿಸ್ತಾರದ ಆಧುನೀಕರಣ ಹಾಗೂ ಸಾರ್ವಜನಿಕರ ಸುಖಕರ ಪ್ರಯಾಣಕ್ಕಾಗಿ ದಕ್ಷ ಯೋಜನೆ ರೂಪಿಸುವುದು ಹಾಗೂ ಅನುಷ್ಠಾನಗೊಳಿಸುವುದು ಪ್ರಮುಖ ಕಾರ್ಯಗಳಲ್ಲಿ ಅಡಗಿವೆ. ಬೆ.ಮ.ಸಾ.ಸಂಸ್ಥೆಯ ಬಸ್ಸುಗಳು ಬೆಂಗಳೂರಿನ ದಶ ದಿಕ್ಕುಗಳನ್ನು ತಲುಪಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಆಕರ್ಷಣೀಯ ಸೇವೆ ಎನ್ನುವುದರ ಜೊತೆಗೆ ಮಾದರಿ ಪ್ರಯಾಣದ ಆಯ್ಕೆ ಮಾಡಿವೆ.  ಸಾರ್ವಜನಿಕ ಪ್ರಯಾಣಿಕರ ವ್ಯವಸ್ಥೆಯಲ್ಲಿ ಬೆಂ.ಮ.ಸಾ.ಸಂಸ್ಥೆಯು ಅಳವಡಿಸಿಕೊಂಡ ದಕ್ಷ ಆಡಳಿತ ವ್ಯವಸ್ಥೆ, ಸಿಬ್ಬಂದಿ, ಗುಣಮಟ್ಟ ಹಾಗೂ ಪರಿಸರ ಕಾರ್ಯ ಯೋಜನೆಗೆಳು ಮತ್ತು ಕರ್ನಾಟಕ ಸರ್ಕಾರದ ಹಾಗೂ ಗೌರವಾನ್ವಿತ ಪ್ರಯಾಣಿಕರ ಬೆಂಬಲವು ಈ ಸಂಸ್ಥೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಕಾರಣವಾಗಿದೆ.

ನಮ್ಮ ಧ್ಯೇಯ:(MISSION)

  1. ಸಾರ್ವಜನಿಕ ಪ್ರಯಾಣಿಕರಿಗೆ (ಗುಣಮಟ್ಟದ, ಪರಿಣಾಮಕಾರಿ, ಸಮಗ್ರ ಮತ್ತು ಸುರಕ್ಷಿತ) ಸೇವೆಗಳನ್ನು ಒದಗಿಸುವುದು.
  2. ಪ್ರಯಾಣಿಕರ ಸ್ನೇಹಿ ಸೇವಾ ಯೋಜನೆ ಮತ್ತು ಪ್ರೋತ್ಸಾಹ.
  3. ಸಂಪನ್ಮೂಲಗಳ ಗರಿಷ್ಟ ಬಳಕೆ ಹಾಗೂ ಸಾಮಥ್ರ್ಯ ಅಭಿವ್ಯದ್ಧಿ.
  4. ಪರಿಸರಸ್ನೇಹಿ ಮತ್ತು ತಾಳಬಲ್ಲ  ಆಚರಣೆಗಳನ್ನು ಅಳವಡಿಸಿಕೊಳ್ಳುವುದು.
  5. ಪ್ರಯಾಣಿಕರ ಪಡಿ ಮಾಹಿತಿ ವ್ಯವಸ್ಥೆಯನ್ನು ಬಲಪಡಿಸುವುದು.
  6. ವಾಹನಗಳ  ಆಧುನಿಕರಣ ಮತ್ತು ಶೂನ್ಯ ಕೆಟ್ಟು ನಿಲ್ಲುವಿಕೆಯನ್ನು ಸಾಧಿಸುವುದು.
  7. ಸೇವೆಗಳ ಪರಿಣಾಮಕಾರಿ ಪೂರೈಕೆಗಾಗಿ ದಕ್ಷ ವ್ಯವಸ್ಥೆಯನ್ನು ರೂಪಿಸುವುದು.
  8. ಪಾಲುದಾರರ ಮಾಹಿತಿಗಾಗಿ, ಕಾರ್ಯಾಚರಣೆ ವಿವರಗಳನ್ನು ಪರಿಶೀಲಿಸಿ ವರದಿಸಲ್ಲಿಸುವುದು.
  9. ಸಂಸ್ಥೆಯ ಒಡೆತನದ ಭೂಮಿ, ಕಟ್ಟಡಗಳು ಮತ್ತು ಬಸ್ಸುಗಳ ನಿರ್ವಹಣೆಯಿಂದ ವಾಣಿಜ್ಯ ಆದಾಯ ಹೆಚ್ಚಿಸುವುದು.
  10. ಕಾರ್ಯಾಚರಣೆಗಳು ಮತ್ತು ಆಡಳಿತದಲ್ಲಿ ದಕ್ಷತೆ ಹೆಚ್ಚಿಸುವುದು.
  11. ಅಂತರ್ ಸಂಸ್ಥೆ ಸಮನ್ವಯ ಮತ್ತು ವಿವಿಧ ಮಾದರಿ ಸಾರಿಗೆ ವ್ಯವಸ್ಥೆಗಳ ಅನುಸಂಧಾನಕ್ಕಾಗಿ ಸಹಕರಿಸುವುದು.
  12. ಕಾರ್ಯ ಯೋಜನೆಗಳ ರೂಪು ರೇಷೆ  ಹಾಗೂ ಅನುಷ್ಟಾನಗಳನ್ನು ನಿರ್ವಹಿಸಿ ಸೇವಾ ಆಚರಣೆಗಳನ್ನು ತಾಳಬಲ್ಲ ಆಚರಣೆಗಳನ್ನಾಗಿ ಮಾಡುವುದು.
  13. ಸೇವೆಯ ಗುಣಮಟ್ಟವನ್ನು ಸುಧಾರಿಸಲು ಮಾಹಿತಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳವುದು.
  14. ಸಮಾಜದ ದುರ್ಬಲ ವರ್ಗಗಳಿಗೆ ಪ್ರಯಾಣದ ರಿಯಾಯತಿಯನ್ನು ವಿಸ್ತರಿಸುವುದು.
  15. ಸಾಂಸ್ಕೃತಿಕ ಸಂಗಮ ಮತ್ತು ರಾಷ್ಟ್ರೀಯ ಸಮಗ್ರತೆ ಮತ್ತು ಏಕತೆಗೆ ಸಹಕರಿಸುವುದು.
  16. ನಗರ ಸಾರಿಗೆ ರಂಗದಲ್ಲಿ  ಸಂಶೋಧನೆಗೆ ಪ್ರೋತ್ಸಾಹಿಸುವುದು.

 

 

ಇತ್ತೀಚಿನ ನವೀಕರಣ​ : 22-11-2023 12:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080