ಇತಿಹಾಸ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಬೇರ್ಪಟ್ಟು ಸರ್ಕಾರಿ ಆದೇಶದಂತೆ ದಿನಾಂಕ ೧೫-೦೮-೧೯೯೭ ರಿಂದ ಜಾರಿಗೆ ಬರುವಂತೆ ಸ್ವತಂತ್ರ ಸಂಸ್ಥೆಯಾಗಿ ಅಸ್ತಿತ್ವಕ್ಕೆ ಬಂದು ಕಾರ್ಯಾರಂಭ ಮಾಡಿರುತ್ತದೆ. ಇದು ೧೯೯೩ ರಿಂದ ೨ ವಿಭಾಗಗಳನ್ನು ಹೊಂದಿದ್ದು, ಇವುಗಳಿಗೆ ಮುಖ್ಯಸ್ಥರಾಗಿ ಒಬ್ಬ ನಿರ್ದೆÃಶಕರು ಕಾರ್ಯನಿರ್ವಹಿಸುತ್ತಿದ್ದರು. ಇದಕ್ಕೆ ಮುನ್ನ ೧೯೬೧ ರಿಂದ ಈ ಸಂಸ್ಥೆಯು ಎಂ.ಎಸ್.ಆರ್.ಟಿ.ಸಿ./ಕೆ.ಎಸ್.ಆರ್.ಟಿ.ಎಸ್.ಯ ಅಂಗವಾಗಿತ್ತು.

ಬೆಂ.ಮ.ಸಾ.ಸಂಸ್ಥೆಯು ರಚನೆಯಾದ ನಂತರ ಘಟಕಗಳು ಮತ್ತು ಕೇಂದ್ರ ಕಛೇರಿಯ ಮಧ್ಯೆ ನೇರ ಸಂಪರ್ಕ ಕಲ್ಲಪಿಸಿ, ಉತ್ತಮ ನಿಯಂತ್ರಣ ಸಾಧಿಸಲು ಹಾಗೂ ಉತ್ಪಾದಕತೆ ಮತ್ತು ದಕ್ಷತೆ ಹೆಚ್ಚಿಸುವ ದೃಷ್ಟಿಯಿಂದ ಸಂಸ್ಥೆಯು ದ್ವಿ-ಹಂತ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ೨೦೧೧-೧೨ ರಲ್ಲಿ ಉತ್ತಮ ಸಂಪರ್ಕ ಮತ್ತು ನಿರ್ವಹಣೆಗೆ ಅನುಕೂಲವಾಗುವಮತೆ ಘಟಕಗಳು, ವಿಭಾಗಗಳು ಮತ್ತು ಕೇಂದ್ರ ಕಛೇರಿ ಎಂಬ ಮೂರು ಹಂತದ ಆಡಳಿತ ವ್ಯವಸ್ಥೆಗೆ ಪರಿವರ್ತನೆ ಹೊಂದಿರುತ್ತದೆ. ತದನಂತರ ೨೦೧೭-೧೮ ರಲ್ಲಿ ಉತ್ತಮ ನಿರ್ವಹಣೆಗೆ ಪುನಃ ಆಡಳಿತ ವ್ಯವಸ್ಥೆಯನ್ನು ದ್ವಿಹಂತಕ್ಕೆ ಜಾರಿಗೆ ತಂದಿದೆ.

 

 

ಇತ್ತೀಚಿನ ನವೀಕರಣ​ : 14-05-2019 01:52 PM ಅನುಮೋದಕರು: Admin