ಅಭಿಪ್ರಾಯ / ಸಲಹೆಗಳು

ಇಲಾಖೆಗಳು

ಕ್ರ.ಸಂ.  ಇಲಾಖೆ ಮುಖ್ಯಸ್ಥರು ವಿವರಣೆ
1. ಸಂಚಾರ ಶಾಖೆ ಪ್ರಧಾನ ವ್ಯವಸ್ಥಾಪಕರು (ಆಚರಣೆ) ಮಾರ್ಗಗಳ ಒಟ್ಟಾರೆ ವಿನ್ಯಾಸ, ಅನುಸೂಚಿಗಳ ಆಚರಣೆ, ಸಂಸ್ಥೆಯು ಆಚರಣೆ ಮಾಡುವ ವಿವಿಧ ರೀತಿಯ ಸೇವೆಗಳಿಗೆ ಪ್ರಯಾಣಿಕರ ಬಸ್ ದರ ನಿಗದಿಪಡಿಸುವಿಕೆ.  ನಿಯಂತ್ರಣ ಕೊಠಡಿ, ಬಸ್ ನಿಲ್ದಾಣ ಮತ್ತು ಕಾಲ್ ಸೆಂಟರ್ ಕೆಲಸಗಳ ನಿಯಂತ್ರಣ ಇತ್ಯಾದಿ.   ಇದರೊಂದಿಗೆ, ಅಪಘಾತಕ್ಕೆ ಸಂಬಂಧಿಸಿದ ಎಲ್ಲಾ ಕೆಲಸ ಕಾರ್ಯಗಳು, ಸಾರ್ವಜನಿಕ ದೂರುಗಳು ಮತ್ತು ಸಲಹೆಗಳು, ಕುಂದುಕೊರತೆ ನಿವಾರಣೆ ಇತ್ಯಾದಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಸಾರಿಗೆಗೆ ಸಂಬಂಧಿಸಿದಂತೆ ಸಾರ್ವಜನಿಕ ಸಂಪರ್ಕ ಹಾಗೂ ಇನ್ನಿತರ ಸಂಚಾರ ಸಂಬಂಧ ಕೆಲಸಗಳನ್ನು ಸಹ ನಿರ್ವಹಿಸುತ್ತಾರೆ.
2. ವಾಣಿಜ್ಯ ಇಲಾಖೆ ಮುಖ್ಯ ಸಂಚಾರ ವ್ಯವಸ್ಥಾಪಕರು(ವಾಣಿಜ್ಯ) ವಾಣಿಜ್ಯ ಸಂಸ್ಥಾಪನೆಗಳ ನಿರ್ವಹಣೆಯಿಂದ ವಾಣಿಜ್ಯ ಆದಾಯವನ್ನು ಗಳಿಸುವುದು  ಹಾಗೂ ಸಂಸ್ಥೆಯ ಸಣ್ಣ ಮತ್ತು ದೊಡ್ಡ ಬಸ್ ನಿಲ್ದಾಣಗಳಲ್ಲಿ ಶೌಚಾಲಯಗಳು, ಕುಡಿಯುವ ನೀರು, ಉಪಹಾರ ಗೃಹ, ಸಾಮಾನ್ಯ ಮಳಿಗೆಗಳು ಮತ್ತು ವಾಹನ ನಿಲುಗಡೆ ಗಳಂತಹ ಮೂಲಭೂತ ಸೌಕರ್ಯಗಳನ್ನು ಪ್ರಯಾಣಿಕರಿಗೆ ಒದಗಿಸುವುದು ಸಂಸ್ಥೆಯ ಸಂಚಾರ ವಾಣಿಜ್ಯ ವಿಭಾಗದ ಉದ್ದೇಶವಾಗಿರುತ್ತದೆ.
3 ಕಾನೂನು ಇಲಾಖೆ ಮುಖ್ಯ ಕಾನೂನು ಅಧಿಕಾರಿ & ಸಾರ್ವಜನಿಕ ಮಾಹಿತಿಧಿಕಾರಿ ನ್ಯಾಯಾಲಯಗಳಿಂದ ಬರುವ ನೋಟೀಸ್ ಗಳನ್ನು ವಕೀಲರಿಗೆ ವಹಿಸುವುದು, ಕಡತ ಮತ್ತು ಮತ್ತು ಷರಾವನ್ನು ಒದಗಿಸುವುದು, ಸಾಕ್ಷಿಗಳನ್ನು ವಿಚಾರಣೆಗೆ ನ್ಯಾಯಾಲಯಗಳ ಮುಂದೆ ಹಾಜರುಪಡಿಸುವುದು ಮತ್ತು ಪ್ರಕರಣಗಳು ಆದ್ಯತೆಯ ಮೇರೆ ತೀರ್ಮಾನವಾಗಲು ಸೂಕ್ತ ಕ್ರಮ ಕೈಗೊಳುವುದು.
4 ಗಣಕ ಇಲಾಖೆ  ಮುಖ್ಯ ಗಣಕ ವ್ಯವಸ್ಥಾಪಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲ್ಲಾ ಇಲಾಖೆಗಳಿಗೆ ಮಾಹಿತಿ ತಂತ್ರಜ್ಞಾನದ ಮೂಲಕ  ತಂತ್ರಾಂಶ ಮತ್ತು ಯಂತ್ರಾಂಶಗಳನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ ಮತ್ತು ನಿರ್ವಹಿಸಲು ಬೆಂಬಲ ಒದಗಿಸುವುದು.  ಇಲಾಖೆಗಳ ಕಾರ್ಯ ಚಟುವಟಿಕೆಗಳ ಯಾಂತ್ರೀಕರಣ, ಗಣಕೀಕರಣ, ಜಾಲ ತಾಣಗಳ ನಿರ್ಮಾಣ ಮಾಡಿ ಮಾಹಿತಿ ತಂತ್ರಜ್ಞಾನದ ಮೂಲಭೂತ ಸೌಕರ್ಯಗಳಿಗೆ ಭದ್ರತೆ ಒದಗಿಸುವುದು.
5 ಕಾಮಗಾರಿ ಅಭಿಯಂತರರು ವಲಯ ಮತ್ತು ವಲಯ-2 ಮುಖ್ಯ ಕಾಮಗಾರಿ ಅಭಿಯಂತರರು ಸಂಸ್ಥೆಯಲ್ಲಿ ನಾಗರಿಕ ಮೂಲಸೌಕರ್ಯದ. ಬಸ್ ನಿಲ್ದಾಣಗಳು, ಬಸ್ ಡಿಪೊಗಳು, ಕಮ್ಮಟಗಳು, ಆಡಳಿತ ಕಚೇರಿಗಳು, ತರಬೇತಿ ಕೇಂದ್ರಗಳು ಇತ್ಯಾದಿ, ನಿರ್ಮಾಣ.
6 ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ. ಮುಖ್ಯ ವ್ಯವಸ್ಥಾಪಕರು (ಮಾಸಂಅ). ಸಂಸ್ಥೆಯ ಎಲ್ಲಾ ಉದ್ಯೋಗಿಗಳಿಗೆ ಅವಶ್ಯ ತರಬೇತಿ ನೀಡಿ, ಅವರ ಕಾರ್ಯದಕ್ಷತೆಯನ್ನು ಉತ್ತಮ ಪಡಿಸುವ ಜವಬ್ದಾರಿ ಹೊಂದಿರುತ್ತದೆ. ಈ ಉದ್ದೇಶಕ್ಕಾಗಿ ವಡ್ಡರಹಳ್ಳಿ, ಬೆಂಗಳೂರು-562130 ರಲ್ಲಿ ಸುಸಜ್ಜಿತ ತರಬೇತಿ ಕೇಂದ್ರವನ್ನು ಹೊಂದಿರುತ್ತದೆ.
7 ಕಾರ್ಮಿಕ ಇಲಾಖೆ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ  ಸಂಸ್ಥೆ ಮತ್ತು ಕಾರ್ಮಿಕರ ನಡುವೆ ಸೌಹಾರ್ದಯುತ ವಾತಾವರಣ ಕಲ್ಪಿಸಿ ಕೈಗಾರಿಗಾ ಬಾಂದವ್ಯವನ್ನು ಕಾಪಾಡಿಕೊಂಡು ಹೋಗುವುದು. ಕಾರ್ಮಿಕ ಕಲ್ಯಾಣ ಯೋಜನೆಗಳಾದ ಆರೋಗ್ಯ, ವಿದ್ಯಾಭ್ಯಾಸ ಹಾಗೂ ಇನ್ನಿತರ ಯೋಜನೆಗಳನ್ನು ಜಾರಿಗೆ ತರುವ ಜೊತೆಗೆ ಕೈಗಾರಿಕಾ ಒಪ್ಪಂದದನ್ವಯ ಅನೇಕ ಶಾಸನಬದ್ದ ಸವಲತ್ತುಗಳನ್ನು ಕಲ್ಪಿಸುವುದಿರುತ್ತದೆ.
8 ಲೆಕ್ಕಪತ್ರ ಇಲಾಖೆ ನಿರ್ದೇಶಕ(ಹಣಕಾಸು)ಮತ್ತುಆರ್ಥಿಕ  ಸಲಹೆಗಾರ ನಿರ್ವಹಣೆ ಮತ್ತು ನಿಗಮದ ಆದಾಯ ಕಾರ್ಯಾಚರಣೆ ಜವಾಬ್ದಾರಿ.
9 ತಾಂತ್ರಿಕ ಇಲಾಖೆ ಪ್ರಧಾನ ವ್ಯವಸ್ಥಾಪಕರು (ತಾಂತ್ರಿಕ) ವಾಹನಗಳ ಮುನ್ನೆಚ್ಚರಿಕಾ ನಿರ್ವಹಣಾ ವ್ಯವಸ್ಥೆ/ವಿಧಾನಗಳ ಮೇಲುಸ್ತುವಾರಿಯ ಜವಾಬ್ದಾರಿ
10 ಸಾರಿಗೆ ಯೋಜನೆ ಇಲಾಖೆ  ಮುಖ್ಯ ತಾಂತ್ರಿಕ ಅಭಿಯಂತರರು  (ಉ ಮತ್ತು ಸಾರಿಗೆ ಯೋಜನೆ) ಅನುಗುಣವಾಗಿ ಬೇಕಾಗುವ ಬಸ್ಸುಗಳ ಖರೀದಿಯ ಯೋಜನೆ ರೂಪಿಸಿ ಖರೀದಿಸುವುದು ಹಾಗೂ ಸಾರಿಗೆ ಯೋಜನೆಗಳ ಕಾರ್ಯ ನಿರ್ವಹಿಸುವುದು.
11 ಆಡಳಿತ ಶಾಖೆ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಸಂಸ್ಥೆಯ ಸುಗಮ ಕಾರ್ಯನಿರ್ವಹಣೆಗೆ ಆಡಳಿತ ನೆರವನ್ನು ಇಲಾಖೆಯು ಒದಗಿಸುತ್ತಿದೆ. ಪ್ರಮುಖ ಕಾರ್ಯ ವಿಧಾನಗಳು, ಸರ್ಮಪಕ ಮಾನವ ಸಂಪನ್ಮೂಲ ಯೋಜನೆ, ಲಭ್ಯವಿರುವ ಕಾಲಿ ಹುದ್ದೆಗಳನ್ನು ಪಾರದರ್ಶಕ ನೇಮಕಾತಿ ಹಾಗೂ ಪದೋನ್ನತಿ ಪ್ರಕ್ರಿಯೆಗಳನ್ವಯ ಭರ್ತಿ ಮಾಡುವುದು. ಸಿಬ್ಬಂದಿ/ ಅಧಿಕಾರಿಗಳ ಸೇವೆಯನ್ನು ಸಮರ್ಪಕ ಸದ್ಬಳಕೆ ಮಾಡಲು ಪಾರದರ್ಶಕ ವರ್ಗಾವಣೆ ಪ್ರಕ್ರಿಯೆ. ಎಲ್ಲಾ ಸಿಬ್ಬಂದಿಗಳ ದೈನಂದಿನ ಸೇವೆಗೆ ಸಂಬಂಧಿಸಿದ ಸಿಬ್ಬಂದಿ ಶಾಖೆಯ ವಿಷಯ ನಿರ್ವಹಣೆ. ಸಿಬ್ಬಂದಿಗಳಲ್ಲಿ ಶಿಸ್ತನ್ನು ರೂಢಿಸಲು ಹಾಗೂ ಕಾರ್ಯ ನಿರ್ವಹಣೆಯನ್ನು ಉತ್ತೇಜಿಸಲು ಶಿಸ್ತಿನ ಕಾರ್ಯವಿಧಾನಗಳನ್ನು ನಿರ್ವಹಿಸಲಾಗುತ್ತಿದೆ.
12 ಭದ್ರತಾಮತ್ತು ಜಾಗೃತಾ ಇಲಾಖೆ ಮುಖ್ಯ ಭದ್ರತಾ ಮತ್ತು ಜಾಗೃತಾ ಅಧಿಕಾರಿ ಭದ್ರತಾ ಮತ್ತು ಜಾಗೃತಾ ಇಲಾಖೆಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಆಸ್ತಿಯನ್ನು ಸಂರಕ್ಷಿಸಲು ಸ್ಥಾಪಿಸಲಾಗಿದೆ. ಈ ಇಲಾಖೆಯು ಸೋರುವಿಕೆ, ದುರ್ಬಳಕೆ, ವಂಚನೆ, ಹಾಗೂ ಇತರೆ ಸಮಾಜಮೌತುಕ ಚಟುವಟಿಕೆಗಳ ಬಗ್ಗೆ ಸೂಕ್ತ ಮಾಹಿತಿ ಸಂಗ್ರಹಿಸುತ್ತದೆ, ಹಾಗೂ ಸಂಸ್ಥೆಯ "ಕಣ್ಣು ಮತ್ತು ಕಿವಿಯಂತೆ" ಕೆಲಸ ನಿರ್ವಹಿಸಿ ಸಂಸ್ಥೆಯ ಎಲ್ಲಾ ನೌಕರರು ಸಂಪೂರ್ಣ ಪ್ರಮಾಣಿಕತೆಯಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಶ್ರಯೋಭಿವೃದ್ಧಿಗಾಗಿ ಕೆಲಸ ಮಾಡಲು ಜಾಗೃತವಹಿಸುತ್ತದೆ.
13 ಆಂತರಿಕ ಲೆಕ್ಕಪರಿಶೋಧನಾ ಶಾಖೆ ಉಪಮುಖ್ಯ  ಲೆಕ್ಕಾಧಿಕಾರಿ     -ಆಂ.ಲೆ.ಪ ಎಲ್ಲಾ ಘಟಕ/ವಿಭಾಗ/ಇಲಾಖೆಗಳ ಪರಿಶೀಲನೆಯ ಜವಾಬ್ದಾರಿ ಹಾಗೂ ಮಾಹಿತಿ ಹಕ್ಕು ಅಧಿನಿಯಮದ ನೋಡಲ್ ಅಧಿಕಾರಿ.
14 ವೈದ್ಯಕೀಯ ಇಲಾಖೆ ಮುಖ್ಯ ವೈದ್ಯಕೀಯ ಅಧಿಕಾರಿ ಸಂಸ್ಥೆಯ ಎಲ್ಲಾ ನೌಕರರಿಗೆ ಸಕಾಲಕ್ಕೆ ವೈದ್ಯಕೀಯ ಚಿಕಿತ್ಸೆ ನೀಡುವುದು, ಸೌಲಭ್ಯಗಳನ್ನು ವಿಸ್ತರಿಸುವುದು ಹಾಗೂ ಆರೋಗ್ಯ ಸುಧಾರಣೆ ಬಗ್ಗೆ ಅರಿವು ಮೂಡಿಸುವುದು.
15 ಮಂಡಳಿ ಕಾರ್ಯದರ್ಶಿ ಇಲಾಖೆ ಮಂಡಳಿ ಕಾರ್ಯದರ್ಶಿ ಸಂಸ್ಥೆಯ ಮಂಡಳಿ ಸಭೆಗಳನ್ನು ಏರ್ಪಡಿಸುವ ಸಂಬಂಧದ ಕಾರ್ಯ ಚಟುವಟಿಕೆಗಳ ಜವಾಬ್ದಾರಿ.
16 ಎಂ..ಎಸ್ ಮುಖ್ಯ ವ್ಯವಸ್ಥಾಪಕರು, ಎಂ..ಎಸ್ ಎಂ.ಐ.ಎಸ್ ಇಲಾಖೆ ಮಾಹಿತಿಗಳನ್ನು ಸಂಗ್ರಹಿಸುವುದು ಮತ್ತು ಕ್ರೋಡೀಕರಿಸುವುದು ವಿಶ್ಲೇಷಿಸುವುದು ಮತ್ತು ವ್ಯಾಖ್ಯಾನಿಸುವುದು ಹಾಗೂ ಇವುಗಳ ಮೂಲಕ ಕಾರ್ಯನೀತಿಗಳನ್ನು ರೂಪಿಸುವ ಸಲುವಾಗಿ ಆಡಳಿತ ಮತ್ತು ಇತರೆ ಇಲಾಖೆಗಳೊಂದಿಗೆ ಸಂಸ್ಥೆಯ ಅಭಿವೃಧ್ದಿಗೆ ಸಹಕರಿಸುವುದು.
17 ಸಾರ್ವಜನಿಕ  ಸಂಪರ್ಕ ಇಲಾಖೆ. ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ. ಸಾರ್ವಜನಿಕ ಸಂಪರ್ಕ ಇಲಾಖೆಯು ಸಾರ್ವಜನಿಕ ಪ್ರಯಾಣಿಕರೊಂದಿಗೆ ಹಾಗೂ ಸಂಸ್ಥೆ ಮತ್ತು ಮಾಧ್ಯಮದವರೊಂದಿಗ ಉತ್ತಮ ಸಂಪರ್ಕ ಬೆಳೆಯಲು ಪಾರದರ್ಶಕತೆಯಾಗಿ ಕರ್ತವ್ಯ ನಿರ್ವಹಿಸುತ್ತದೆ. ಮತ್ತು ಪ್ರತಿನಿತ್ಯ ದಿನಪತ್ರಿಕೆಗಳಲ್ಲಿ ಸಂಸ್ಥೆಯ ಬಗ್ಗೆ ಪ್ರಕಟಗೊಳ್ಳುವ ಸುದ್ಧಿ-ಸಮಾಚಾರಗಳ ಕ್ರೋಡೀಕೃತ ವರದಿಯನ್ನು ಸಂಗ್ರಹಿಸಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರು ಮತ್ತು ಎಲ್ಲಾ ಇಲಾಖಾ ಮುಖ್ಯಸ್ಥರ ಗಮನಕ್ಕೆ ತರುವುದು ಮುಖ್ಯ ಕರ್ತವ್ಯವಾಗಿದೆ.  ಜಾಹೀರಾತು/ಪ್ರೋತ್ಸಾಹ ಕೋರಿ ಬರುವ ಅರ್ಜಿಗಳನ್ನು ಮಾನ್ಯ ವ್ಯವಸ್ಥಾಪಕ ನಿರ್ದೇಶಕರ ಅನುಮೋದನೆಯನ್ನು ಪಡೆದು ಜಾಹೀರಾತು ನೀಡುವುದು.  ಸಂಸ್ಥೆಯಲ್ಲಿ ಜರುಗುವ ಸಭೆ ಸಮಾರಂಭಗಳನ್ನು ನಡೆಸುವುದು ಮತ್ತು ಅದಕ್ಕೆ ಸಂಬಂಧಿಸಿದಂತೆ, ಪತ್ರಿಕಾ ಪ್ರಕಟಣೆಯನ್ನು ನೀಡುವುದು, ಮಾಧ್ಯಮ ಸುದ್ಧಿಗೋಷ್ಟಿ ಆಯೋಜಿಸುವುದು. ಎಲ್ಲಾ ಇಲಾಖೆಗಳ ಟೆಂಡರ್ ಪ್ರಕಟಣೆಯನ್ನು ಎಂ.ಸಿ.ಎ. ಮುಖಾಂತರ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವಂತೆ ಕ್ರಮಕೈಗೊಳ್ಳುವುದು.  ಇತರೆ ರಸ್ತೆ ಸಾರಿಗೆ ಸಂಸ್ಥೆಗಳ ಅಧಿಕಾರಿಗಳು ಸಂಸ್ಥೆಗೆ ಭೇಟಿ ನೀಡುವ ಸಂಧರ್ಭದಲ್ಲಿ ಅವರಿಗೆ ವಸತಿ/ಸಾರಿಗೆ/ಇನ್ನಿತರ ಸವಲತ್ತು ಒದಗಿಸುವುದು.  ಸಂಸ್ಥೆಗೆ ಸಂಬಂಧಿಸಿದ ಇನ್ನಿತರ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.
18 ಉಗ್ರಾಣ ಮತ್ತು ಖರೀದಿ ಇಲಾಖೆ ಉಗ್ರಾಣ ಮತ್ತು ಖರೀದಿ ನಿಯಂತ್ರಕರು ಸಂಸ್ಥಯ ಉಗ್ರಾಣ ಮತ್ತು ಖರೀದಿ ಇಲಾಖೆಯು ಉಗ್ರಾಣ ಮತ್ತು ಖರೀದಿಯ ನಿರ್ವಹಣೆಯನ್ನು ಸಮರ್ಥವಾಗಿ ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಸಂಸ್ಥಯಲ್ಲಿನ  ಘಟಕದಿಂದ ಕೇಂದ್ರ ಕಛೇರಿಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಮಗ್ರಿಗಳ ಖರೀದಿ,  ತಪಶೀಲು  ಮತ್ತು ಅನುಪಯುಕ್ತ ವಸ್ತುಗಳ ವಿಲೇವಾರಿ ಹಾಗೂ ಇತರೆ ಕಾರ್ಯ ಚಟುವಟಿಕೆಗಳ ನಿಯಂತ್ರಣವನ್ನು ಹೊಂದಿರುತ್ತದೆ.

ಇತ್ತೀಚಿನ ನವೀಕರಣ​ : 22-11-2023 12:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080